ಪೋಸ್ಟ್‌ಗಳು

ರಾತ್ರೋರಾತ್ರಿ ಬುಲ್ಡೋಜರ್ ನುಗ್ಗಿಸಿ 400 ಎಕರೆ ಅರಣ್ಯ ನಾಶ!!, ಆಗಿದ್ದರೂ ಏನು?

 ಕಾಡು ಬೆಳೆಸಿ, ನಾಡು ಉಳಿಸಿ ;ಆದರೆ ತೆಲಂಗಾಣ ಸರ್ಕಾರ ಮಾಡಿದ್ದೇನು?  400 ಎಕರೆ ಅರಣ್ಯ ಪ್ರದೇಶವಿರುವ ಕಾಂಚಾ ಗಲಿಬೌಲಿ ಎಂಬ ಅರಣ್ಯ ಪ್ರದೇಶವನ್ನು ತೆಲಂಗಾಣ ಸರ್ಕಾರ ತೆರುವು ಮಾಡಲು ಯೋಜನೆ ಹಾಕಿತ್ತು. ಈ ಯೋಜನೆಯ ಹಿಂದಿನ ಉದ್ದೇಶವೆನೆಂದರೆ, 400 ಎಕರೆ ಅರಣ್ಯವನ್ನು ನಾಶ ಮಾಡಿ IT ಪಾರ್ಕ ಮಾಡುವ ಉದ್ದೇಶವನ್ನು ಹೊಂದಿತ್ತು.IT ಪಾರ್ಕನಿಂದ 50 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗುತ್ತೇ ಮತ್ತು 5,00,000 ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುವುದು ಸರ್ಕಾರದ ನಿರೀಕ್ಷೆಯಾಗಿತ್ತು.  ಆದರೆ ಇದರಿಂದಾಗುವ ನಷ್ಟ ದ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ.ಹಸಿರಿನಿಂದ ಕಂಗೊಳಿಸುತ್ತಾ ಇದ್ದಂತಹ ಈ ಅರಣ್ಯದಲ್ಲಿ 734 ಹೂ ಬಿಡುವಂತಹ ಸಸಿಗಳು, 10 ಜಾತಿ ಸಸ್ತನಿಗಳು, 220 ಜಾತಿಯ ಪಕ್ಷಿಗಳು, ಮತ್ತು ಕೋಟ್ಯಂತರ ಜೀವ-ಜಂತುಗಳು ಇಲ್ಲಿ ವಾಸಿಸುತ್ತಿವೆ. ವನ್ಯಜೀವಿಗಳಿಗೆ ಕುತ್ತು ತಂದೊಡ್ಡಿದೆ. ಜೆಸಿಬಿಯು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದಂತೆ ಪ್ರಾಣಿಗಳು ದಿಕ್ಕಾಪಾಲಾದವು, ನವಿಲುಗಳ ಆರ್ತನಾದ ಎಂತವರ ಹೃದಯವನ್ನು ಕರಗಿಸುವಂತಿತ್ತು, ಜಿಂಕೆ, ಮೊಲ, ಪಕ್ಷಿಗಳು ತಮ್ಮ ಮನೆಗೆ ಯಾರೋ ಇಡುತ್ತಿದ್ದಾರೆಂದು ದಿಕ್ಕಾಪಾಲಾಗಿ ಅತ್ತಿಂದಿತ್ತ-ಇತ್ತಿಂದತ್ತ ಹೊಡಾಡುತ್ತಿದ್ದವು. ಪ್ರಾಣಿ ಪ್ರೀಯರ ಕಣ್ಣಲ್ಲಿ ನೀರು ಬರುವಂತ್ತಿತ್ತು. ಶತಮಾನಗಳಿಂದಲೂ ಹಳೆಯ ಮರಗಳಿಗೆ ನೆಲೆಯಾಗಿದ್ದಂತಹ ಪ್ರದೇಶ ಒಂದೊಂದೇ ಕೊಡಲಿ ಏಟಿಗೆ ನಲುಗಿದಂತೆ ಕಾಡು ಮುಖ ರೋದನೆ...