ರಾತ್ರೋರಾತ್ರಿ ಬುಲ್ಡೋಜರ್ ನುಗ್ಗಿಸಿ 400 ಎಕರೆ ಅರಣ್ಯ ನಾಶ!!, ಆಗಿದ್ದರೂ ಏನು?
ಕಾಡು ಬೆಳೆಸಿ, ನಾಡು ಉಳಿಸಿ ;ಆದರೆ ತೆಲಂಗಾಣ ಸರ್ಕಾರ ಮಾಡಿದ್ದೇನು?
400 ಎಕರೆ ಅರಣ್ಯ ಪ್ರದೇಶವಿರುವ ಕಾಂಚಾ ಗಲಿಬೌಲಿ ಎಂಬ ಅರಣ್ಯ ಪ್ರದೇಶವನ್ನು ತೆಲಂಗಾಣ ಸರ್ಕಾರ ತೆರುವು ಮಾಡಲು ಯೋಜನೆ ಹಾಕಿತ್ತು. ಈ ಯೋಜನೆಯ ಹಿಂದಿನ ಉದ್ದೇಶವೆನೆಂದರೆ, 400 ಎಕರೆ ಅರಣ್ಯವನ್ನು ನಾಶ ಮಾಡಿ IT ಪಾರ್ಕ ಮಾಡುವ ಉದ್ದೇಶವನ್ನು ಹೊಂದಿತ್ತು.IT ಪಾರ್ಕನಿಂದ 50 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗುತ್ತೇ ಮತ್ತು 5,00,000 ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುವುದು ಸರ್ಕಾರದ ನಿರೀಕ್ಷೆಯಾಗಿತ್ತು.
ಆದರೆ ಇದರಿಂದಾಗುವ ನಷ್ಟ ದ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ.ಹಸಿರಿನಿಂದ ಕಂಗೊಳಿಸುತ್ತಾ ಇದ್ದಂತಹ ಈ ಅರಣ್ಯದಲ್ಲಿ 734 ಹೂ ಬಿಡುವಂತಹ ಸಸಿಗಳು, 10 ಜಾತಿ ಸಸ್ತನಿಗಳು, 220 ಜಾತಿಯ ಪಕ್ಷಿಗಳು, ಮತ್ತು ಕೋಟ್ಯಂತರ ಜೀವ-ಜಂತುಗಳು ಇಲ್ಲಿ ವಾಸಿಸುತ್ತಿವೆ. ವನ್ಯಜೀವಿಗಳಿಗೆ ಕುತ್ತು ತಂದೊಡ್ಡಿದೆ. ಜೆಸಿಬಿಯು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದಂತೆ ಪ್ರಾಣಿಗಳು ದಿಕ್ಕಾಪಾಲಾದವು, ನವಿಲುಗಳ ಆರ್ತನಾದ ಎಂತವರ ಹೃದಯವನ್ನು ಕರಗಿಸುವಂತಿತ್ತು, ಜಿಂಕೆ, ಮೊಲ, ಪಕ್ಷಿಗಳು ತಮ್ಮ ಮನೆಗೆ ಯಾರೋ ಇಡುತ್ತಿದ್ದಾರೆಂದು ದಿಕ್ಕಾಪಾಲಾಗಿ ಅತ್ತಿಂದಿತ್ತ-ಇತ್ತಿಂದತ್ತ ಹೊಡಾಡುತ್ತಿದ್ದವು. ಪ್ರಾಣಿ ಪ್ರೀಯರ ಕಣ್ಣಲ್ಲಿ ನೀರು ಬರುವಂತ್ತಿತ್ತು. ಶತಮಾನಗಳಿಂದಲೂ ಹಳೆಯ ಮರಗಳಿಗೆ ನೆಲೆಯಾಗಿದ್ದಂತಹ ಪ್ರದೇಶ ಒಂದೊಂದೇ ಕೊಡಲಿ ಏಟಿಗೆ ನಲುಗಿದಂತೆ ಕಾಡು ಮುಖ ರೋದನೆಯನ್ನು ಅನುಭವಿಸುವಂತಾಗಿತ್ತು. ಪ್ರಾಣಿ- ಪಕ್ಷಿಗಳು ಅವುಗಳ ವಾಸಸ್ಥಾನವನ್ನು ಕಳೆದುಕೊಳ್ಳುವಂತಾಗಿತ್ತು.
ಇದರ ನಡುವೆ ಅರಣ್ಯ ನಾಶ ಮಾಡದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಮಾಡಿದೆ. ಹೈದರಾಬಾದ್ ನ ಕೇಂದ್ರಿಯ ವಿವಿ ಯಲ್ಲಿ ವಿದ್ಯಾರ್ಥಿಗಳು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಹರಾಜಿಗೆ ಇಟ್ಟಿದಂತಹ ಅರಣ್ಯ ಭೂಮಿಯನ್ನು ಈಗ ತೆರವು ಮಾಡಲಾಗಿದೆ. 50ಕ್ಕಿಂತ ಹೆಚ್ಚು ಬುಲ್ಡೋಜರ್ ಗಳಿಂದ ತೆರವು ನಡೆಸಲಾಗಿತ್ತು, ವಿವಿ ಜಾಗವನ್ನು ಸರ್ಕಾರ ಆಕ್ರಮಿಸಿಕೊಂಡಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಇತ್ತ ನಟ ಪ್ರಕಾಶ ರಾಜ್ ಟ್ವೀಟ್ ಕೂಡ ಮಾಡಿದ್ದು, ಇಲ್ಲಿ ಆಗ್ತಾ ಇರುವಂತಹ ಅನ್ಯಾಯವನ್ನು ಸಹಿಸೊಕಾಗ್ತಿಲ್ಲ, ಅದೇಷ್ಟೋ ಮುಖ ಜೀವಿಗಳಿಗೆ ನೆಲೆದಂತಾಗುತ್ತದೆ. ನಾನು ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಸಪೋರ್ಟರ್ ಯುಟ್ಯೂಬ್ ಸ್ಟಾರ್ ಧ್ರುವರಾಟಿ ರಾಹುಲ್ ಗಾಂಧಿಗೆ ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದ್ದು, ಇದು Un-Expectable ತಕ್ಷಣವೇ ಮಾರಣ ಹೋಮವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ವಿಪಕ್ಷಗಳತ್ತ ಬೆಟ್ಟು ಮಾಡಿದ್ದಾರೆ. ತೆಲಂಗಾಣದ IT ಮತ್ತು ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು ಅವರು ಈ ಭೂಮಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಸೇರಿಲ್ಲ, ಇದು ಸರ್ಕಾರಿ ಆಸ್ತಿ ಎಂದು ಹೇಳಿದ್ದಾರೆ. ಆದರೆ BJP ಸರ್ಕಾರ ಯಾವುದಕ್ಕೂ ಪ್ರತಿಕ್ರಿಯಿಸದೇ ಜಾಣ ಕುರುಡುತನ ತೋರಿಸುತ್ತಾ ಇರುವುದು ಟೀಕೆಗೆ ಗುರಿಯಾಗ್ತಾಯಿದೆ.
ಕಾಂಚಾ ಗಲಿಬೌಲಿಯನ್ನು ರಾಷ್ಟ್ರೀಯ ಉದ್ಯಾನವನವೇಂದು ಘೋಷಿಸಲು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಏಪ್ರಿಲ್ 07 ರಂದು ಮುಂದಿನ ನ್ಯಾಯಲಯದ ವಿಚಾರಣೆಗೆ ಕಾಯದೆ ಭೂಮಿಯನ್ನು ಗುರುತಿಸುವ ಮೊದಲು ಸರ್ಕಾರವು ಕೆಲಸವನ್ನು ಪ್ರಾರಂಭಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೆ ಪ್ರಶ್ನೆಯಾಗಿದೆ. ಕಾನೂನಿನ ಭಯವು ಸರ್ಕಾರಕ್ಕೆ ಇಲ್ವಾ ಎಂದು ವಿದ್ಯಾರ್ಥಿಗಳು ಕೀಡಿಕಾರುತ್ತಾ ಇದ್ದಾರೆ.
ಅಧಿಕೃತವಾಗಿ ಹರಾಜನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮರ ಕುಡಿಯುವುದನ್ನು ತಕ್ಷಣ ನಿಲ್ಲಿಸಬೇಕು. ಸಂಪೂರ್ಣ ಜೀವ ವೈವಿಧ್ಯ ಪರಿಣಾಮ ಮೌಲ್ಯ ಮಾಪನವನ್ನು ನಡೆಸಿ 400 ಎಕರೆ ಕಾಂಚಾ ಗಲಿಬೌಲಿಯನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸೊವರೆಗೂ ತಮ್ಮ ಉಗ್ರ ಹೋರಾಟ ನಿಲ್ಲಲ್ಲ ಎಂದು ವಿದ್ಯಾರ್ಥಿಗಳು ಹೊರಾಡುತ್ತಿದ್ದಾರೆ.
ಆದಷ್ಟು ಬೇಗ ಮುಖ ಪ್ರಾಣಿಗಳ ರೋಧನೆಗೆ ಗೆಲುವು ಸಿಗಲಿ ಎನ್ನುವುದೇ ನಮ್ಮ ಆಶಯ.....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ